ಕಿರು ಪರಿಚಯ

      ಸರ್ಕಾರದ ಆದೇಶ ಸಂಖ್ಯೆ: ಇಡಿ-54-ಎಂಯುಎನ್ 80(ಐ), ದಿನಾಂಕ 29-08-1980ರ ಆದೇಶದಲ್ಲಿ  ಮೈಸೂರು ವಲಯದ ಪ್ರಾದೇಶಿಕ ಕಚೇರಿಯನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿರುತ್ತದೆ.  ಸದರಿ ಅನುಮೋದನೆಯಂತೆ ಕಚೇರಿಯು ಪ್ರಾರಂಭಗೊಂಡು ತನ್ನ ಅಧೀನಕ್ಕೆ ಒಳಪಡುವ ಕಾರ್ಯವ್ಯಾಪ್ತಿಯೊಳಗೆ ಕೆಲಸವನ್ನು ನಿರ್ವಹಿಸುತ್ತಾ ಬಂದಿರುತ್ತದೆ.

                ಪ್ರಾದೇಶಿಕ ಕಛೇರಿಯ  ಪ್ರಾರಂಭದ ದಿನಗಳಿಂದಲೂ  ಗುಣಮಟ್ಟದ ಉನ್ನತ ಶಿಕ್ಷಣವು ಸಮಾಜದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಕಾಳಜಿ ಹೊಂದಿರುವ ಕಾಲೇಜು ಶಿಕ್ಷಣ ಇಲಾಖೆಯು,  ಅತಿ ಹಿಂದುಳಿದ ವರ್ಗ, ಮಹಿಳೆಯರು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಅವಕಾಶಗಳಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳುವಲ್ಲಿ ಕಾರ್ಯಪ್ರವರ್ತವಾಗಿರುತ್ತದೆ.

 ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಒಟ್ಟು 75 ಸರ್ಕಾರಿ ಪ್ರಥಮ ದರ್ಜೆ/ಕಾನೂನು ಕಾಲೇಜುಗಳು, 34 ಖಾಸಗಿ ಅನುದಾನಿತ ಪದವಿ/ಕಾನೂನು ಕಾಲೇಜುಗಳು ಹಾಗೂ 09 ಶಿಕ್ಷಣ ಮಹಾವಿದ್ಯಾಲಯಗಳು ಹಾಗೂ 02 ಚಿತ್ರಕಲಾ ಅನುದಾನಿತ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದೆ.