ಜಂಟಿ ನಿರ್ದೇಶಕರ ಕಛೇರಿಯ ಪ್ರಮುಖ ಕಾರ್ಯವೈಖರಿ

ಪ್ರಾದೇಶಿಕ ಜಂಟಿ ನಿರ್ದೇಶಕರ ಪ್ರಮುಖ ಕಾರ್ಯವೈಖರಿ

ಸರ್ಕಾರದ ಆದೇಶ ಸಂಖ್ಯೆ: ಡಿಸಿಇ/83/ಇಎಪಿ/80, ಬೆಂಗಳೂರು ದಿನಾಂಕ 15-12-1980ರನುಸಾರ ಪ್ರಾದೇಶಿಕ ಕಛೇರಿಗೆ ಜಂಟಿ ನಿರ್ದೇಶಕರಿಗೆ ಸಾಮಾನ್ಯ ವಿತ್ತಾಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ.

 1. ಪ್ರಾದೇಶಿಕ ಕಚೇರಿಯ ಅಧಿಕಾರಿ/ಸಿಬ್ಬಂದಿ ವರ್ಗದವರುಗಳಿಗೆ ವೇತನ ಬಿಡುಗಡೆ, ವಾರ್ಷಿಕ ವೇತನ, ಪ್ರಯಾಣ ಭತ್ಯೆ, ತುಟ್ಟಿಭತ್ಯೆ, ಮುಂಗಡ ಭತ್ಯೆ, ಹಬ್ಬದ ಮುಂಗಡ, ರಜೆ ಮಂಜೂರಾತಿ (2 ತಿಂಗಳವರೆಗೂ).
 2. ಸ್ಥಳೀಯವಾಗಿ ಕಚೇರಿಗೆ ಅವಶ್ಯವಿರುವ ಸಾಮಾಗ್ರಿಗಳನ್ನು ಸರ್ಕಾರ ನಿಗಧಿಪಡಿಸಿರುವ ಗರಿಷ್ಟ ವಿತ್ತಾಧಿಕಾರದಂತೆ ಖರೀದಿಸುವುದು.
 3. ಖಾಸಗಿ ಅನುದಾನಿತ ಕಾಲೇಜುಗಳಿಗೆ ಪ್ರತಿ ವರ್ಷ ಜನವರಿ ಮಾಹೆಯಲ್ಲಿ ವಾರ್ಷಿಕ ವೇತನ ಪಟ್ಟಿಯನ್ನು ಅನುಮೋದಿಸುವುದು.
 4. ಆಯುಕ್ತಾಲಯದ ನಿರ್ದೇಶನದಂತೆ ಖಾಸಗಿ ಅನುದಾನಿತ ಕಾಲೇಜುಗಳ ನೌಕರರುಗಳಿಗೆ ವೇತನ ಬಿಡುಗಡೆ ಮಾಡುವುದು.
 5. ಅನುದಾನ ಬಿಡುಗಡೆಯಾಗಿರುವ/ಬಳಕೆ ಮಾಡಿರುವ ರಿಜಿಸ್ಟರ್ ವಹಿ ನಿರ್ವಹಣೆ.
 6. ಖಾಸಗಿ ಅನುದಾನಿತ ಕಾಲೇಜುಗಳಿಗೆ ವೇತನ ಬಾಕಿ, ಗಳಿಕೆ ರಜೆ ಅಧ್ಯರ್ಪಣೆ ಹಾಗೂ ಇತರೆ.
 7. ಕಛೇರಿ ಮತ್ತು ಸರ್ಕಾರಿ ಪ್ರಥಮ ದರ್ಜೆ/ಕಾನೂನು ಕಾಲೇಜುಗಳು ನೌಕರರುಗಳಿಗೆ ವೈದ್ಯಕೀಯ ವೆಚ್ಚ ಮರುಭರಿಕೆ (ಗರಿಷ್ಟ 10,000ರವರೆಗೆ ಮಾತ್ರ) ಮಂಜೂರಾತಿ.
 8. ಅತಿಥಿ ಉಪನ್ಯಾಸಕರುಗಳ ಅನುಮೋದನೆ ಹಾಗೂ ಗೌರವ ಧನ ಬಿಡುಗಡೆ.
 9. ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಆಡಳಿತ ಮಂಡಳಿಯು ನೇಮಿಸಿಕೊಳ್ಳಲಾಗುವ ಅಭ್ಯರ್ಥಿಗಳ ಅನುಮೋದನೆಗೆ ಆಯುಕ್ತರಿಗೆ ಸಲ್ಲಿಸುವುದು.
 10. ಖಾಸಗಿ ಅನುದಾನಿತ ನೌಕರರುಗಳು ಉನ್ನತ ವ್ಯಾಸಂಗಕ್ಕೆ ತೆರಳಲು ಅನುಮತಿ ನೀಡುವುದು.
 11. ಆಯುಕ್ತರ ಅನುಮೋದನೆ/ಅನುಮತಿಯಂತೆ ಖಾಸಗಿ ಅನುದಾನಿತ ನೌಕರರುಗಳಿಗೆ ಮುಂಬಡ್ತಿ, ವೇತನ ನಿಗಧಿ ಪಡಿಸಿಕೊಡುವುದು.
 12. ಖಾಸಗಿ ಅನುದಾನಿತ ನೌಕರರುಗಳಿಗೆ ಗರಿಷ್ಟ 2 ತಿಂಗಳವರೆಗೆ ರಜೆಯನ್ನು ಮಂಜೂರು ಮಾಡುವುದು.
 13. ಸರ್ಕಾರ/ಇಲಾಖೆಯು ನೀಡುವ ನಿರ್ದೇಶನ ಹಾಗೂ ಆದೇಶಗಳ ಪಾಲನೆ ಮಾಡುವುದು.
 14. ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡು ಶೈಕ್ಷಣಿಕ ಕಾರ್ಯನಿರ್ವಹಣೆ ಮಾಡುತ್ತಿರುವ ಬಗ್ಗೆ ಪರಿಶೀಲನೆ.
 15. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಾರ್ಯನಿರ್ವಹಣೆ/ಗೌಪ್ಯ/ಆಸ್ತಿ ಋಣಪಟ್ಟಿಯ ವರದಿಯನ್ನು ಸಂಗ್ರಹಿಸಿ, ನಿಯಮಾನುಸಾರ ಪರಿಶೀಲಿಸಿ ಆಯುಕ್ತರ ಕಛೇರಿಗೆ ಸಲ್ಲಿಸುವುದು.
 16. ಖಾಸಗಿ ಅನುದಾನಿತ ಕಾಲೇಜುಗಳ ಕಾರ್ಯನಿರ್ವಹಣೆ/ಗೌಪ್ಯ/ಆಸ್ತಿ ಋಣಪಟ್ಟಿಯ ವರದಿಯನ್ನು ಸಂಗ್ರಹಿಸಿ, ನಿಯಮಾನುಸಾರ ಪರಿಶೀಲಿಸಿ ಇಟ್ಟುಕೊಳ್ಳುವುದು.
 17. ಈ ಕಚೇರಿ ವ್ಯಾಪ್ತಿಯಲ್ಲಿ ಬರುವ 03 ವಿಶ್ವವಿದ್ಯಾಲಯಗಳ ವೇತನ ಅನುದಾನ ಬಿಡುಗಡೆ.
 18. ಖಾಸಗಿ ಅನುದಾನಿತ ಕಾಲೇಜುಗಳ ಬೋಧಕ ಸಿಬ್ಬಂದಿಗಳ ಹಿರಿಯ / ಆಯ್ಕೆ ವೇತನ ಶ್ರೇಣಿ ಹಾಗೂ ಎಜಿಪಿ ಪ್ರಸ್ತಾವನೆಗಳ ಪರಿಶೀಲನೆ.
 19. ಬೋಧಕೇತರ ಸಿಬ್ಬಂದಿಗಳಿಗೆ ಸ್ಥಗೀತ ವೇತನ ಬಡ್ತಿ, ಟಿಬಿಎ, ಟಿಬಿಪಿ ಹಾಗೂ 20, 25, 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಮಂಜೂರಿ ಮಾಡುವುದು.
 20. ಅನುದಾನಿತ ಕಾಲೇಜುಗಳ ನಿವೃತ್ತ ಸಿಬ್ಬಂದಿಗಳ ಪಿಂಚಣಿ ಪ್ರಸ್ತಾವನೆ ಪರಿಶೀಲಿಸಿ ಕೇಂದ್ರ ಕಚೇರಿಗೆ ಸಲ್ಲಿಸುವುದು.
 21. ಖಾಲಿ ಹುದ್ದೆಗಳ ಭರ್ತಿ ಸಂಬಂಧಿಸಿದಂತೆ ಪ್ರಸ್ತಾವನೆ ಪಡೆದು ಪರಿಶೀಲಿಸಿ ಕೇಂದ್ರ ಕಚೇರಿಗೆ ರವಾನಿಸುವುದು.
 22. ಖಾಸಗಿ ಅನುದಾನಿತ ಕಾಲೇಜುಗಳ ನ್ಯಾಯಾಲಯ ಹಾಗೂ ಮಾಹಿತಿ ಹಕ್ಕು ಪ್ರಕರಣಗಳನ್ನು ನಿರ್ವಹಿಸುವುದು.
 23. ಸರ್ಕಾರಿ/ಖಾಸಗಿ ಕಾಲೇಜುಗಳಲ್ಲಿ ದೂರುಗಳ ವಿಚಾರಣೆ ಮಾಡಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದು.
 24. ಸರ್ಕಾರಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಅತಿಥಿ ಉಪನ್ಯಾಸಕರ ನೇಮಕಾತಿ ಅನುಮೋದನೆ ಹಾಗೂ ಕೇಂದ್ರ ಕಚೇರಿಯಿಂದ ಬಿಡುಗಡೆಯಾದ ಗೌರವಧನ ಬಿಡುಗಡೆ ಮಾಡುವುದು
 25. ವಿದ್ಯಾರ್ಥಿಗಳಿಗೆ ವಿವಿಧ ಶಿಷ್ಯವೇತನ ಬಿಡುಗಡೆ.
 26. ಸರ್ಕಾರಿ ಕಾಲೇಜುಗಳನ್ನು ಹೊಸದಾಗಿ ಪ್ರಾರಂಭಿಸಲು ಮೂಲಭೂತ ಸೌಕರ್ಯಗಳು ಹಾಗೂ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವುದು.
 27. ಅನುದಾನಿತ ಕಾಲೇಜುಗಳ ಲೆಕ್ಕ ತಪಾಸಣೆ (ರಾಜ್ಯ ಲೆಕ್ಕ ಪತ್ರ ಇಲಾಖೆಯ ಸಿಬ್ಬಂದಿ) ನಿರ್ವಹಣೆ.
 28. ಸರ್ಕಾರ ಮತ್ತು ಇಲಾಖೆಯಿಂದ ನಿರ್ದೇಶಿಸಲ್ಪಡುವ ಇತರೆ ಕೆಲಸ ಕಾರ್ಯಗಳು.